0

Your Cart

No products in the cart.
Maathru Millet
Maathru Millet ನಮ್ಮ ದಿನಚರಿ ಜೀವನದಲ್ಲಿಆರೋಗ್ಯದ ಮೊದಲ ಹೆಜ್ಜೆ ಮಾತೃ ಮಿಲ್ಲೆಟ್ ನಿಮ್ಮ ಆರೋಗ್ಯದ ಸಿರಿ

ಸಿರಿಧಾನ್ಯಗಳು ಮಾನವರ ಜೀವನಕ್ಕೆ ತುಂಬಾ ಇಂಪಾರ್ಟೆಂಟು.. ಕೈಲಾಗದ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳೋಕೆ ಸಿರಿಧಾನ್ಯಗಳು ಬೇಕಪ್ಪಾ ಬೇಕು. ಹತ್ತು ಹಲವು ಕಾಯಿಲೆಗಳಿಗೆ ಸಿರಿಧಾನ್ಯಗಳು ರಾಮ ಬಾಣವಂತೆ. ಬದುಕಿಗೆ ಸಿರಿಧಾನ್ಯ ಬಹುಮುಖ್ಯ. ಹೀಗೆಲ್ಲಾ ನಾವು ನೀವು ಸಾಮಾನ್ಯವಾಗಿ ಕೇಳಿರ್ತೀವಿ.. ಓದಿರ್ತೀವಿ.. ಆದ್ರೆ ಆ ಕ್ಷಣಕ್ಕೆ ಸಿರಿಧಾನ್ಯಗಳ ಬಗ್ಗೆ ಉತ್ಸಾಹ ತೋರೋದು ನಿಜ, ಆದ್ರೆ ಎಷ್ಟರ ಮಟ್ಟಿಗೆ ಮನಸ್ಸಿಗೆ ತಗೊಂಡು, ಆ ಬಗ್ಗೆ ಗಂಭೀರವಾಗಿ ಯೋಚಿಸಿ, ನಮ್ಮಗಳ ಬದುಕಲ್ಲಿ ಅಳವಡಿಸಿಕೊಂಡಿದ್ದೇವೆ?
ನೋ – ಚಾನ್ಸ್‌… ಸಾಧ್ಯವೇ ಇಲ್ಲ.. ಆಗ್ತಿಲ್ಲಾ ನಮ್‌ ಕೈಯಲ್ಲಿ… ನಾವು ಬರೀ ಕೇಳೋಕೆ ತಿಳಿಯೋಕೆ ಇನ್ನೊಬ್ಬರಿಗೆ ಆರೋಗ್ಯದ ಬಗ್ಗೆ ಉಪದೇಶ ಮಾಡೋಕೆ ನಮಗೆ ಸಿರಿಧಾನ್ಯಗಳು ಬೇಕು, ಆದ್ರೆ ನಮ್‌ಬದುಕಲ್ಲಿ ಉಪಯೋಗ ಮಾಡ್ತಿದ್ದೀವಾ? ಇಲ್ಲವೇ ಇಲ್ಲ.. ಏನ್ ಮಾಡೋದು ಪರಿಸ್ಥಿತಿ, ಒತ್ತಡದ ಬದುಕು, ದಿನ ಬೆಳಗಾದರೆ ಇರೋ ಕಮಿಟ್‌ಮೆಂಟ್ಸ್‌ಗಳ ಮಧ್ಯೆ ಒಂಚೂರು ಹೊಟ್ಟೆಗೆ ಸೇರಿದನ್ನು ತಿಂದು ಮುಂದಿನ ಕಾರ್ಯಕ್ಕೆ ತೆರಳುತ್ತಿದ್ದೇವೆ. ನೀವು ಮಾತ್ರ ಅಲ್ಲಾ ಈ ಓಡುತ್ತಿರುವ ಕಾಲದಲ್ಲಿ ದುಡಿಯುವ ಪ್ರತಿಯೊಬ್ಬರೂ ಈ ರೇಂಜ್‌ಗೆ ಬ್ಯೂಸಿಯಾಗಿರೋದು ನಿಜ ನೋಡಿ.

ಹೌದು ಸಿಕ್ಕಾಪಟ್ಟೆ ಬ್ಯೂಸಿ ಆಗಿದ್ದೇವೆ.. ಹಾಗಂತ ನಮ್ಮ ಆರೋಗ್ಯದ ಕಡೆ ಗಮನ ಕೊಡದೇ, ಆರೋಗ್ಯ ಕಾಪಾಡಿಕೊಳ್ಳದೆ, ಯಾರಿಗಾಗಿ, ಯಾತಕ್ಕಾಗಿ, ಯಾವ ಸೌಕರ್ಯಕ್ಕಾಗಿ ದುಡಿಬೇಕು..? ಹಾಗಂತ ದುಡಿಯದೇ, ಬರಿ ಆರೋಗ್ಯದ ಕಡೆಯೇ ಗಮನ ಕೊಡ್ತಿದ್ರೆ ಬದುಕು ಸಾಗಬೇಕಲ್ವಾ? ನಮಗಿರುವ ವ್ಯವಹಾರಗಳ ಕೊಡುಕೊಳ್ಳುವಿಕೆಗೆ ದುಡಿಮೆಯೂ ಸಹಜ ಬಿಡಿ…
ಹೀಗಿರುವಾಗ ಆರೋಗ್ಯ ಹಾಗೂ ದುಡಿಮೆ ಈ ಎರಡನ್ನು ಸರಿಸಮನಾಗಿ ರೂಡಿಸಿಕೊಳ್ಳಲು ನಮಗಿರುವ ಒಂದೇ ಒಂದು ದಾರಿ ಅಂದ್ರೆ ಅದುವೇ ಮಿಲ್ಲೆಟ್‌ ಬಳಕೆ. ಹೌದು ಸ್ನೇಹಿತರೆ ನಮ್ಮ ಬದುಕು ಚನ್ನಾಗಿರಬೇಕು.. ಇರುವಷ್ಟು ದಿನ ಆರೋಗ್ಯವಂತರಾಗಿ ಬಾಳಬೇಕು ಅಂದ್ರೆ, ಅದರಲ್ಲೂ ಇತ್ತೀಚಿನ ಒತ್ತಡದ ಬದುಕಿನಲ್ಲಿ ಒಂದಷ್ಟು ವರ್ಷಗಳ ಕಾಲ ಆರೋಗ್ಯಕರವಾಗಿ ಜೀವನ ನಡೆಸಬೇಕಾದರೆ ಸಿರಿಧಾನ್ಯಗಳನ್ನು ಬಳಸಲೇ ಬೇಕು.. ಈ ಸಿರಿಧಾನ್ಯಗಳನ್ನು ನೀವಾಗೇ ಬೆಳೆಯೋಕು ಆಗಲ್ಲಾ.. ಬೆಳೆದ ಸಿರಿಧಾನ್ಯಗಳನ್ನು ಶುಚಿಗೊಳಿಸಿ ತಿಂಗಳುಗಟ್ಟಲೆ ಶೇಖರಿಸಿ ಇಡೋಕು ಸಾಧ್ಯವಾಗುವುದಿಲ್ಲ. ಹಾಗಾದ್ರೆ ಪರಿಶುದ್ಧ ಹಾಗೂ ಪೌಷ್ಠಿಕಾಂಶ ಭರಿತ ಸಿರಿಧಾನ್ಯಗಳು ಎಲ್ಲಿ ದೊರೆಯುತ್ತದೆ? ಈ ಪ್ರಶ್ನೆಗೆ ಉತ್ತರ ಅಂದ್ರೆ ಅದುವೇ “ಮಾತೃ ಮಿಲ್ಲೆಟ್‌ ಹೆಲ್ತ್‌ ಮಿಕ್ಸ್‌”. ಶುದ್ಧವಾದ ಹಾಗೂ ಮಾರುಕಟ್ಟೆಯಲ್ಲಿ ದೊರೆಯುವ ಅತ್ಯಂತ ನಂಬಿಕಸ್ಥ ಮಿಲ್ಲೆಟ್‌. ಹೆತ್ತ ತಾಯಿ ನಮ್ಮನ್ನು ಸಲಹಿದಂತೆ ಅಷ್ಟೇ ಪ್ರೀತಿ ವಾತ್ಸಲ್ಯದ ಪ್ರತಿರೂಪ ಈ ಮಾತೃ ಮಿಲ್ಲೆಟ್‌.

ಶುದ್ಧ ಹಾಗೂ ಶ್ರೇಷ್ಠ ಗುಣಮಟ್ಟ ಮತ್ತು ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುವ ಈ ಮಾತೃ ಮಿಲ್ಲೆಟ್‌ ಹೆಲ್ತ್‌ಮಿಕ್ಸ್‌ ಸದ್ಯ ಮಾರುಕಟ್ಟೆಯಲ್ಲಿ ಪ್ರತಿಯೊಬ್ಬರನ್ನು ಆಕರ್ಷಿಸುತ್ತಿದೆ. ಸಾವಯವ ಪದ್ಧತಿಯಲ್ಲಿಯೇ ಬೆಳೆದಿರುವ ರಾಗಿ, ಅರ್ಕ, ನವಣೆ, ಸಾಮೆ, ಅಗಸೆ, ಕುರಲು, ಊದಲು, ಸ0ಜ್ಜೆ, ಬಾರ್ಲಿ, ಜೋಳ, ಶೇಂಗಾ, ಮೆಂತ್ಯೆ, ಕೆಂಪು ಅಕ್ಕಿ, ಬೇಳೆ-ಕಾಳುಗಳು, ಒಣ ಹಣ್ಣುಗಳಾದ (ಡ್ರೈ ಫ್ರೂಟ್ಸ್‌) ಉತ್ತುತ್ತೆ, ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ, ಅಂಜೂರ, ಔಷಧಿ ಗುಣುವುಳ್ಳ ಗಿಡಮೂಲಿಕೆ ಹಾಗೂ ಅನೇಕ ಧಾನ್ಯಗಳನ್ನು ಶುದ್ಧಿಕರಿಸಿ, ನಂತರ ಸಂಸ್ಕರಿಸಿ, ಒಣಗಿಸಲಾಗುತ್ತದೆ. ತದನಂತರ ಬಾಣಲೆಯಲ್ಲಿ ಹುರಿದು, ತಣ್ಣಗಾಗಿಸಿ, ಹದವಾಗಿ ಪುಡಿಗೊಳಿಸಲಾಗುತ್ತದೆ. ಇದಾದ ನಂತರ ಈ ಫೌಡರನ್ನು ಗಾಳಿಯಾಡದ ಹಾಗೆ ಪರಿಸರ ಸ್ನೇಹಿಯಾಗಿ ಪ್ಯಾಕ್‌ ಮಾಡಲಾಗುತ್ತದೆ.

ಇಂತಹ ಸಿರಿಧಾನ್ಯಗಳ ಮಿಕ್ಸ್‌ನ ನೀವು ಪ್ರತಿದಿನ ಮಿಲ್ಕ್‌ ಶೇಕ್‌ ಅಥವಾ ಪಾಯಸ ಹಾಗೂ ಬೆಳಗಿನ ಉಪಹಾರ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು. ಅಂದ್ರೆ ಇಡ್ಲಿ, ದೋಸೆ, ರೊಟ್ಟಿ ಈ ಖಾದ್ಯಗಳ ಹಿಟ್ಟಿನೊಂದಿಗೆ ಮಾತೃ ಮಿಲ್ಲೆಟ್‌ ಹೆಲ್ತ್‌ ಮಿಕ್ಸ್‌ ಸಿರಿಧಾನ್ಯ ಫೌಡರ್‌ನ ಬಳಸುವುದನ್ನು ರೂಡಿಮಾಡಿಕೊಳ್ಳಬಹುದು. ಈ ರೀತಿಯಾಗಿ ಪ್ರತಿ ದಿನ ಸಿರಿಧಾನ್ಯಗಳನ್ನು ಬಳಸುವುದರಿಂದ, ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿ, ಸ್ನಾಯು ಸೆಳೆತ ನಿವಾರಣೆಗೆ ಸಹಕಾರಿ, ರಕ್ತದೊತ್ತಡ ಸಮತೋಲನ, ಹೃದಯ, ಪಿತ್ತ ಜನಕಾಂಗ, ಮೂತ್ರಪಿಂಡದ ಆರೋಗ್ಯ ಕಾಪಾಡುವುದು ಜೊತೆಗೆ ದೇಹದಲ್ಲಿ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿಯಾಗಿದೆ.

ಒಟ್ಟಾರೆಯಾಗಿ ನಿಮ್ಮ ದೇಹದ ಆರೋಗ್ಯಕ್ಕೆ ಮಾತೃ ಮಿಲ್ಲೆಟ್‌ ಹೆಲ್ತ್‌ ಮಿಕ್ಸ್‌ಸದಾ ಸಹಕಾರಿಯಾಗಲಿದೆ.. ಈ ಬಗ್ಗೆ ನಿಮ್ಮಲ್ಲಿ ಯಾವುದೇ ರೀತಿಯ ಕುತೂಹಲಗಳಿದ್ದರೂ ನೇರವಾಗಿ ಕರೆಮಾಡಿ ಮಾತನಾಡಬಹುದಾಗಿದೆ.. ನಮ್ಮ ಸಂಖ್ಯೆ :- +91 8147 42 9292

ಮಾತೃ ಮಿಲ್ಲೆಟ್‌ ಹೆಲ್ತ್‌ ಮಿಕ್ಸ್‌ಗೆ ಡಿಸ್ಟ್ರಿಬ್ಯೂಟರ್‌ ಬೇಕಾಗಿದ್ದಾರೆ.
ಸಂಪರ್ಕಿಸಿ :- +91 8147 42 9292

Leave a Reply

Your email address will not be published. Required fields are marked *

Awesome Work

Related Post

×